ಮಿತ್ರರೆ…ಈ ನನ್ನ ಅಂತರ್ಜಾಲ ತಾಣಕ್ಕೇ ಸಂದರ್ಶಿಸುತ್ತಿರುವ ನಿಮಗಿದೋ…

ಮನದುಂಬಿ ನಿಮ್ಮ ಗೌತಮ ಸ್ವಾಗತಿಸುತ್ತಿದ್ದಾನೆ.

ಬನ್ನಿ ಬನ್ನಿ,

ಅಂತರ್ಜಾಲ ಪಥದಲ್ಲಿ ಸಾಗುತ್ತಿರುವ ಮಿತ್ರರೇ. ಕ್ಷಣಕಾಲ ನಿಂತು ಈನನ್ನ ಪುಟ್ಟ ಗುಡಿಸಲನ್ನು ಪಾವನಗೊಳಿಸಿ.

ಬಾವನಾಪೂರ್ವಕವಾಗಿ, ತುಂಬಿದ ಬಿಂದಿಗೆಯಲ್ಲಿ ಪಾದಪ್ರಕ್ಷಾಲನೆಗೆ ಶುದ್ದೋದಕವನ್ನಿತ್ತು, ವಂದನೆಯನ್ನರ್ಪಿಸಿ,
ಮಂದಾರ ಕುಸುಮಗಳನ್ನು ತಮ್ಮ ಪಾದಾರವಿಂದದಡಿ ಬೀರಿ ಗೌರವಿಸುತ್ತಿದ್ದೇನೆ.

ಇದೇ… ನನ್ನ ಮನೆ, ಒಮ್ಮೆ ಎಡಬಾಗಕ್ಕೆ ಬಗ್ಗಿ ನೋಡಿ… ಅದೋ….ಈ ನಿಮ್ಮ ನಾನು, ಕವಿತೆ, ಯಾರಿಗೂ ಅಲ್ಲದ ಯಾರಿಗೋ ಆದ ಪತ್ರ, ಹವ್ಯಕ ಅಡಿಗೆಗಳು,ಎಂದೆಲ್ಲಾ ಹೆಸರಿಸಿಕೊಂಡ ಪುಟ್ಟ ಪುಟ್ಟ ಕೋಣೆಗಳು.
ಗೊತ್ತು ಇಲ್ಲಿ ವಜ್ರ ಮಾಣಿಕ್ಯದಂತಹ ವಿಷಯದ ದಟ್ಟಣೆ ಇಲ್ಲದಿರಬಹುದು, ಆದರೆ ಪ್ರತಿಕೋಣೆಗೂ ಕೈಕಸೂತಿ
ಹಾಕುವ ಪುಟ್ಟ ಪ್ರಯತ್ನಮಾಡಿದ್ದೇನೆ. ಪ್ರತಿಕೋಣೆಗೂ ತಾವು ಚಿತ್ತೈಸಿ , ಕೋಣೆಯನ್ನು ಪುನೀತಗೊಳಿಸಿ.

ತಮ್ಮ ಅಕ್ಷುದೃಷ್ಟಿ ಹೊಂದಿದ ಈನನ್ನ ಮನೆ ಮಂದಿರದಷ್ಟೇ ಪಾವನವಾಗಿದೆಯೆಂಬುದು ದಿವಾಕರನಷ್ಟೇ(ಸೂರ್ಯ) ಸತ್ಯ.

ಈನನ್ನ ಇಲ್ಲಿನ ತಪ್ಪು-ಒಪ್ಪುಗಳನ್ನ ಇಲ್ಲಿರುವ Commentsನ ಮೂಲಕ ನಮೂದಿಸಿ.

ಈನನ್ನ “ಜಗವೆಂಬ ತೊಟ್ಟಿಲಲಿ ಮಗುವೊಂದು ನಾನು” ಎಂಬ Blogspot ನಿಮ್ಮಿಂದಾಗಿ ಹೀಗೆ ಹೇಳುತ್ತಿದೆ.
ಧನ್ಯೋ ಇಂಟರ್ನೆಟ್ ಆಶ್ರಮಃ.

Host unlimited photos at slide.com for FREE!

ವಂದನೆಗಳೊಂದಿಗೆ,

ಆ ನಿಮ್ಮ ಈ ನಾನು. ಪುಟ್ಟ ಪೋರ.

ಗೌತಮ

web counter

Follow

Get every new post delivered to your Inbox.